ನವದೆಹಲಿ, ಜು 20 (DaijiworldNews/SM): ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳನ್ನು ಹೊರತುಪಡಿಸಿ ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಮಾಹಿತಿ ನೀಡಿದರು.
2ನೇ ಹಂತದಲ್ಲಿ ಎಲೆಕ್ಟ್ರಿಕ್ ವಾಹನಗಳು ತಯಾರಾಗುತ್ತಿದ್ದು, ಇದಕ್ಕೆ ಪೂರಕವಾದ ಯೋಜನೆಯಡಿಯನ್ನು ರೂಪಿಸಲಾಗಿದೆ. 68 ನಗರಗಳಲ್ಲಿ 2,877 ಸಾರ್ವಜನಿಕ EV ಚಾರ್ಜಿಂಗ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. 9 ಎಕ್ಸ್ಪ್ರೆಸ್ವೇಗಳು, 16 ಹೆದ್ದಾರಿಗಳಲ್ಲಿ 1,576 EV ಚಾರ್ಜಿಂಗ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಜೂಲೈ 14ರಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 13,34,385ಕ್ಕೆ ಏರಿಕೆಯಾಗಿದೆ. ಒಟ್ಟು 2,826 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಪ್ರಕಾರ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಜಿನೀವಾದಲ್ಲಿರುವ ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ನ ವಿಶ್ವ ರಸ್ತೆ ಅಂಕಿ ಅಂಶಗಳ ಪ್ರಕಾರ, 2020ರಲ್ಲಿ ಭಾರತದಲ್ಲಿ 1.5 ಲಕ್ಷ ರಸ್ತೆ ಅಪಘಾತಗಳಿಂದ ಸಾವುಗಳು ದಾಖಲಾಗಿವೆ. 207 ದೇಶಗಳಲ್ಲಿ ದಾಖಲಾದ ಒಟ್ಟು ರಸ್ತೆ ಅಪಘಾತಗಳ ಶೇಕಡಾ 26.37 ರಷ್ಟಿದೆ ಎಂದು ನಿತಿನ್ ಗಡ್ಕರಿ ಹೇಳಿದರು.
ಭಾರತದಲ್ಲಿ 27,25,87,170 ನೋಂದಾಯಿತ ವಾಹನಗಳಿವೆ. ದೇಶದಲ್ಲಿ ಬಂಡವಾಳ ವೆಚ್ಚವನ್ನು ವಸೂಲಿ ಮಾಡಿದ ನಂತರವೂ ವಿವಿಧ ಟೋಲ್ ರಸ್ತೆಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ಸಚಿವಾಲಯಕ್ಕೆ ದೂರುಗಳು ಬರುತ್ತಿದ್ದವು. ಇದಕ್ಕೆ ಉತ್ತರಿಸಿದ ನಿತಿನ್ ಗಡ್ಕರಿ ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ನಿಂದ ಬಳಕೆದಾರರ ಬಳಿ ಶುಲ್ಕ ವಸೂಲಿ ಮಾಡುತ್ತಿದೆ. ಈ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ದೂರುಗಳು ಬಂದಿವೆ. ಜೂನ್ 30, 2022ರಂತೆ BOT ಆಪರೇಟರ್ಗಳು ಎನ್ಹೆಚ್ಎಐನೊಂದಿಗೆ ತಮ್ಮ ಒಪ್ಪಂದದ ಪ್ರಕಾರ 214 ಪ್ಲಾಜಾಗಳಲ್ಲಿ ಬಳಕೆದಾರರಿಂದ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎಂದರು.