ಬದರೀನಾಥ್, ಜು 20 (DaijiworldNews/MS): ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಬುಧವಾರ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದ್ದು, ಹಲವು ಕಾರ್ಮಿಕರು ಅದರಡಿ ಸಿಲುಕಿದ್ದಾರೆ.
ಋಷಿಕೇಶ-ಬದರೀನಾಥ್ ಹೆದ್ದಾರಿಯ ರುದ್ರಪ್ರಯಾಗದಿಂದ 6 ಕಿಲೋಮೀಟರ್ ದೂರದಲ್ಲಿರುವ ನಾರ್ಕೋಟಾ ಪ್ರದೇಶದ ಬಳಿ ಈ ಘಟನೆ ನಡೆದಿದೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಸೇತುವೆಯ ಅವಶೇಷಗಳನ್ನು ತೆರವುಗೊಳಿಸಿ ಅದರಡಿ ಸಿಲುಕಿದ್ದ ಜನರನ್ನು ಹೊರತೆಗೆಯುವಲ್ಲಿ ಶ್ರಮಿಸುತ್ತಿದೆ. ಈಗಾಗಲೇ ಆರು ಜನರನ್ನು ಆರು ಜನರನ್ನು ರಕ್ಷಿಸಿ ಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕನಿಷ್ಠ ಐದು ಜನರು ಇನ್ನೂ ಸಿಲುಕಿರುವ ಶಂಕೆ ಇದೆ ಎಂದು ಎಸ್ಡಿಆರ್ಎಫ್ ತಂಡ ತಿಳಿಸಿದೆ.