ನವದೆಹಲಿ, ಜು 20 (DaijiworldNews/MS): ಭಾರತದ ಪ್ರಖ್ಯಾತ ಕ್ರೀಡಾಪಟು ಪಿಟಿ ಉಷಾ ಅವರು ಇಂದು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೌ ಜು. 6ರಂದು ಮೇಲ್ಮನೆಗೆ ನಾಮ ನಿರ್ದೇಶನಗೊಂಡಿದ್ದರು.
ಖ್ಯಾತ ಸಂಯೋಜಕ ಇಳಯರಾಜ, ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಉಷಾ ಅವರನ್ನು ಸರ್ಕಾರವು ಸಂಸತ್ತಿನ ಮೇಲ್ಮನೆಗೆ ಭಾರತೀಯ ಜನತಾ ಪಕ್ಷ ನಾಮನಿರ್ದೇಶನ ಮಾಡಿತ್ತು.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಅಪ್ರತಿಮ ಕ್ರೀಡಾ ಪಟುಗಳಲ್ಲಿ ಒಬ್ಬರು.
ವಿಶ್ವ ಜೂನಿಯರ್ ಇನ್ವಿಟೇಶನಲ್ ಮೀಟ್, ಏಷ್ಯನ್ ಚಾಂಪಿಯನ್ಶಿಪ್ ಗಳು ಮತ್ತು ಏಷ್ಯನ್ ಗೇಮ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದಿರುವ ಕಾರಣ ಆಕೆಯನ್ನು ಪಯ್ಯೋಲಿ ಎಕ್ಸ್ಪ್ರೆಸ್ ಎಂದು ಕರೆಯಲಾಗುತ್ತದೆ.