ಬೆಂಗಳೂರು, ಜು 20 (DaijiworldNews/HR): ನನಗೆ ನನ್ನ ಮನೆಯ ಬಜೆಟ್ ಗೊತ್ತಿಲ್ಲ. ಹೆಂಡತಿ ಪಾರ್ವತಿ ಕೇಳಿದಾಗ ಖರ್ಚಿಗೆ ದುಡ್ಡು ಕೊಡ್ತೀನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ನನ್ನ ಮನೆಯ ಬಜೆಟ್ ಅನ್ನು ಮಂಡಿಸಿಲ್ಲ, ಅದೆಲ್ಲವನ್ನೂ ಪತ್ನಿ ಪಾರ್ವತಿಯೇ ನೋಡಿಕೊಳ್ಳುವುದು. ನನ್ನ ಕುಟುಂಬದಿಂದ ರಾಜಕಾರಣಕ್ಕೆ ಸಂಪೂರ್ಣ ಸಹಕಾರ ಸಿಕ್ಕಿದೆ ಎಂದರು.
ಇನ್ನು ನನ್ನ ಊರಿನಿಂದ ನಮಗೆ ಅಕ್ಕಿ, ಬೇಳೆ, ಕಾಯಿ, ಎಣ್ಣೆ ಎಲ್ಲಾ ಬರುತ್ತದೆ. ಹಾಗಾಗಿ ಪತ್ನಿ ಖರ್ಚಿಗೆ ಕೇಳಿದರೆ ಅಗತ್ಯಕ್ಕೆ ತಕ್ಕಷ್ಟು ಹಣ ಕೋಡುತ್ತೇನೆ. ರಾಜಕಾರಣಕ್ಕೆ ನನ್ನ ಕುಟುಂಬ ಎಂದೂ ಅಡ್ಡಿ ಮಾಡಿಲ್ಲ ಎಂದು ಹೇಳಿದ್ದಾರೆ.