ಬೆಂಗಳೂರು,ಜು 20 (DaijiworldNews/HR): ಸ್ಟಾರ್ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಂತ್ ಕಪೂರ್ಗೆ ಡ್ರಗ್ಸ್ ಪೆಡ್ಲರ್ಗಳ ಮಾಹಿತಿ ಪಡೆಯಲು ಹಲಸುರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸಿದ್ಧಾಂತ್ ಕಪೂರ್ ಅವರನ್ನು ಒಂದು ಬಾರಿ ವಿಚಾರಣೆ ಮಾಡಿ ಪೊಲೀಸರು ಕಳುಹಿಸಿದ್ದರು. ಸದ್ಯ ಸಿದ್ಧಾಂತ್ ಕಪೂರ್ ಅನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಯುತ್ತಿದ್ದು, ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಇನ್ನು ಇನ್ನು ಪಾರ್ಟಿ ನಡೆದ ದಿನ ಮಾಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತಾಗಿತ್ತು. ಈ ಹಿನ್ನೆಲೆ ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರು ತಯಾರು ನಡೆಸಿದ್ದಾರೆ.