ಬೆಂಗಳೂರು, ಜು 20 (DaijiworldNews/MS): ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಂದ ಅಧಿಕಾರ ಕಿತ್ತುಕೊಂಡದಲ್ಲದೇ ಅವರ ನೆರಳನ್ನೂ ಬಿಡದಂತೆ ಅಳಿಸಿ ಹಾಕುವ ಪಣ ತೊಟ್ಟಿದೆ ’ಸಂತೋಷ ಕೂಟ' ಎಂದು ರಾಜ್ಯ ಕಾಂಗ್ರೆಸ್ ಘಟಕ ಪರೋಕ್ಷವಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಬೊಟ್ಟು ಮಾಡಿ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ "ಯಡಿಯೂರಪ್ಪನವರ ನೆರಳನ್ನೂ ಬಿಡದಂತೆ ಅಳಿಸಿ ಹಾಕುವ ಪಣ ತೊಟ್ಟಿದೆ 'ಸಂತೋಷ ಕೂಟ'. ಬಿಎಸ್ ವೈ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದಲ್ಲದೆ ಅವರ ಆಪ್ತರನ್ನೂ ನಿಗಮ ಮಂಡಳಿಗಳಿಂದ ಕಿತ್ತು ಹಾಕಿದ್ದು "ಬಿಎಸ್ ವೈ ಮುಕ್ತ ಬಿಜೆಪಿ " ಅಭಿಯಾನದ ಕಾರ್ಯಾಚರಣೆ ಭಾಗ ಎಂದು ಲೇವಡಿ ಮಾಡಿದೆ.
ಆದರೆ "ನಿಷ್ಠೆ ಬದಲಿಸಿದ ಬಿ.ಎಸ್ ಬೊಮ್ಮಯಿ ಅವರು ಈಗ "ಸಂತೋಷ"ದಿಂದ ಇರಲು ಬಯಸಿದ್ದಾರೆ" ಎಂದು ಕಾಂಗ್ರೆಸ್ ಅಪಹಾಸ್ಯ ಮಾಡಿದೆ.