ನವದೆಹಲಿ,ಜು 20 (DaijiworldNews/MS): ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರದ ಕೋವಿಡ್ ಲಸಿಕೆ ಅಭಿಯಾನ ಕಳೆದ ಭಾನುವಾರ 200 ಕೋಟಿಯ ಮೈಲುಗಲ್ಲು ಸಾಧಿಸಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್, ʻ200 ಕೋಟಿ ಲಸಿಕೆಗಳನ್ನು ನೀಡುವ ಮತ್ತೊಂದು ಮೈಲಿಗಲ್ಲನ್ನು ತಲುಪಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಕೋವಿಡ್-19 ನ ಪರಿಣಾಮವನ್ನು ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಿಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ' ಎಂದಿದ್ದಾರೆ.
೧೮ ತಿಂಗಳ ಹಿಂದೆ ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಡ್ರೈವ್ ಅನ್ನು ಪ್ರಾರಂಭಿಸಿದ ನಂತರ, ದೇಶವು ಕಳೆದ ಭಾನುವಾರ 200 ಕೋಟಿ ವ್ಯಾಕ್ಸಿನೇಷನ್ ಡೋಸ್ಗಳನ್ನು ನಿರ್ವಹಿಸುವ ಮೈಲಿಗಲ್ಲನ್ನು ದಾಟಿದೆ. ಭಾರತ ಮತ್ತೆ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದರು.