ನವದೆಹಲಿ, ಜು 19 (DaijiworldNews/SM): ದೇಶದಲ್ಲಿ ತೆರಿಗೆ ಸೋರಿಕೆ ತಡೆದು, ಹಣಕಾಸು ವ್ಯವಸ್ಥೆಯನ್ನು ಸಮದೂಗಿಸಲು ಸರಕು ಸೇವಾ ತೆರಿಗೆ ಅನಿವಾರ್ಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಧಾನ್ಯಗಳು ಮತ್ತು ಬೇಳೆಕಾಳುಗಳು ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಧಾನ್ಯಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವ ನಿರ್ಧಾರವನ್ನು ರಾಜ್ಯಗಳೊಂದಿಗೆ ಒಮ್ಮತದಿಂದ ತೆಗೆದುಕೊಳ್ಳಲಾಗಿದೆ ಎಂಬ ಸ್ಪಷ್ಟೀಕರಣವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.
ಜಿಎಸ್ಟಿ ಪೂರ್ವದ ಅವಧಿಯಲ್ಲಿ ರಾಜ್ಯಗಳು ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಸಂಗ್ರಹಿಸುತ್ತಿದ್ದವು. ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿರುವುದು ಇದೇ ಮೊದಲಲ್ಲ ಎಂದು ಸರಣಿ ಟ್ವೀಟ್ಗಳಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.