ನವದೆಹಲಿ, ಜು 19 (DaijiworldNews/MS): ರಾಷ್ಟ್ರಪತಿ ಚುನಾವಣೆಯ ಮತದಾನ ನಿನ್ನೆ ಮುಕ್ತಾಯವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಭವಿಷ್ಯವನ್ನು ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಮತಪೆಟ್ಟಿಗೆಗಳು ಪ್ರತಿ ರಾಜ್ಯಗಳ ರಾಜಧಾನಿಗಳಿಂದ ದೆಹಲಿಗೆ ಹಿಂದಿರುಗಿದೆ. ಇದಕ್ಕಾಗಿ 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬ ಹೆಸರಿನಲ್ಲಿ ಪ್ರತ್ಯೇಕ ವಿಮಾನ ಟಿಕೆಟ್ಗಳೊಂದಿಗೆ ವಿಮಾನಗಳಲ್ಲಿ ಪ್ರಯಾಣಿಸಿದೆ.
ಚುನಾವಣಾ ಆಯೋಗದ ಸೂಚನೆ ಮೇರೆಗೆ ‘ಮಿಸ್ಟರ್ ಬ್ಯಾಲೆಟ್ ಬಾಕ್ಸ್’ ಹೆಸರಿನಲ್ಲಿ ವಿಮಾನದಲ್ಲಿ ಅಧಿಕಾರಿಗಳ ಜೊತೆಗೆ ಮತಪೆಟ್ಟಿಗೆಗೆ ಸಂಪೂರ್ಣ ಸೀಟು ಮೀಸಲಿಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಲಾಗಿದೆ.
ಭಾರತೀಯ ಚುನಾವಣಾ ಆಯೋಗವು (ಇಸಿಐ) ರಾಷ್ಟ್ರಪತಿ ಚುನಾವಣೆಗಾಗಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾಧಿಕಾರಿಗಳೊಂದಿಗೆ ಮತಪೆಟ್ಟಿಗೆಗಳನ್ನು ವಾಪಾಸ್ ತರಿಸಿಕೊಂಡಿದೆ. ಬ್ಯಾಲೆಟ್ ಬಾಕ್ಸ್ಗಳನ್ನು ಪ್ರಯಾಣಕ್ಕಾಗಿ ವಿಮಾನದ ಮುಂಭಾಗದ ಸಾಲಿನಲ್ಲಿ'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬ ಹೆಸರಿನಲ್ಲಿ ಪ್ರತ್ಯೇಕ 'ದ್ವಿಮುಖ ಪ್ರಯಾಣದ' ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಲಾಗಿತ್ತು.