ಬೆಂಗಳೂರು, ಜು 19 (DaijiworldNews/HR): ಸಿದ್ದರಾಮಯ್ಯ ಅವರಿಗೆ ಎಪ್ಪತ್ತೈದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆಯುತ್ತಿದರೆ. ಇತ್ತ ಎಂಬತ್ತು ವರ್ಷ ಪೂರೈಸುತ್ತಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಜನ್ಮದಿನ ಆಚರಿಸದಂತೆ ಪತ್ರ ಬರೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಪತ್ರ ಬರೆದಿದ್ದು, ಜುಲೈ 21ಕ್ಕೆ ನನಗೆ 80 ವರ್ಷವಾಗುತ್ತದೆ. ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗುತ್ತದೆ. ಅಂದು ಸದನ ಚಾಲ್ತಿಯಲ್ಲಿರುವ ಜತೆಗೆ ಕಾಂಗ್ರೆಸ್ ಪಕ್ಷದ ತ್ಯಾಗದ ಪ್ರತಿರೂಪ ಸೋನಿಯಾ ಗಾಂಧಿಯವರ ಇಡಿ ವಿಚಾರಣೆ ಅಗ್ನಿ ಪರೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅವರ ಜತೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇನ್ನು ಆ ದಿನ ನಾನು ಬೆಂಗಳೂರು ಅಥವಾ ಕಲಬುರ್ಗಿಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಹುಟ್ಟು ಹಬ್ಬ ಆಚರಣೆ ಬೇಡ ಎಂದಿದ್ದು, ಸಿದ್ದರಾಮೋತ್ಸವ ಆಚರಣೆಯ ಉತ್ಸಾಹದಲ್ಲಿ ಇರುವ ಬಣಕ್ಕೆ ಟಾಂಗ್ ನೀಡುವುದಕ್ಕೆ ಖರ್ಗೆ ಈ ರೀತಿ ಹೇಳಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ.