ಕೊಲ್ಲಂ, ಜು 19 (DaijiworldNews/MS): ಕೊಲ್ಲಂನ ಕೇಂದ್ರದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಭಾಗವಾಗಿ ಬಾಲಕಿಯ ಒಳಉಡುಪುಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ ಮಹಿಳಾ ಭದ್ರತಾ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೂರನಾಡು ಮೂಲದವರ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಭದ್ರತಾ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕೆಯ ಭವಿಷ್ಯವೇ ಮುಖ್ಯವೋ ಅಥವಾ ಒಳಉಡುಪು ಮುಖ್ಯವೋ ಎಂದು ಆರೋಪಿಗಳು ಆಕೆಯನ್ನು ಕೇಳಿದ್ದಾರೆಂದು ವರದಿಯಾಗಿದೆ. ಅವಮಾನದಿಂದ ಉಂಟಾದ ಮಾನಸಿಕ ಒತ್ತಡದಿಂದ ಬಾಲಕಿಗೆ ಪರೀಕ್ಷೆಯನ್ನು ಚೆನ್ನಾಗಿ ಬರೆಯಲಾಗಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಅದೇ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಮತ್ತೊಬ್ಬ ಅಭ್ಯರ್ಥಿ ಕೂಡ ಇದೇ ರೀತಿಯ ದೂರು ದಾಖಲಿಸಿದ್ದಾರೆ.
ಕೇರಳದ ವಿದ್ಯಾರ್ಥಿಯೊಬ್ಬಳು ದಾಖಲಿಸಿರುವ ದೂರು ಕಪೋಲ ಕಲ್ಪಿತ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದ್ದಾರೆ.