ಚೆನ್ನೈ, ಜು 19 (DaijiworldNews/MS): ಖ್ಯಾತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಮಣಿರತ್ನಂ ಅವರಿಗೆ ಸೋಮವಾರ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಣಿರತ್ನಂ ಕಳೆದ ವಾರ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾದ 'ಪೊನ್ನಿಯಿನ್ ಸೆಲ್ವನ್'ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಜುಲೈ 8 ರಂದು ಚೆನ್ನೈನಲ್ಲಿ ಭಾಗವಹಿಸಿದ್ದರು .
ನಟಿ ಸುಹಾಸಿನಿ ಅವರ ಪತಿಯಾಗಿರುವ ಮಣಿರತ್ನಂ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.