ಅಂಬಾಲಾ, ಜು 19 (DaijiworldNews/HR): ಕೈತಾಲ್ನ ಅಂಬಲ ರಸ್ತೆಯಲ್ಲಿರುವ ಚಿರಂಜೀವಿ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 4 ಅಂತಸ್ತಿನ ಮನೆಯ ಛಾವಣಿಯ ಮೇಲೆ ಗೂಳಿಯೊಂದು ಹತ್ತಿದ್ದು, ಈ ಗೂಳಿಯನ್ನು ಕೆಳಗಿಳಿಸಲು ಪಶು ಇಲಾಖೆ ಹಾಗೂ ಸ್ಥಳೀಯರು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ.
ಗೂಳಿಯು ಛಾವಣಿಯ ಮೇಲೆ ಹತ್ತಿರುವುದನ್ನು ಗಮನಿಸಿದ ಸ್ಥಳೀಯರು ಪಶು ಸಂಗೋಪನಾ ಇಲಾಖೆ ಹಾಗೂ ಇತರೆ ಆಡಳಿತಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪಶುಪಾಲನಾ ಇಲಾಖೆ ಹಾಗೂ ಡಾ.ಸುರೇಂದ್ರ ನಾಯೀನ್ ನೇತೃತ್ವದ ಗೌರಕ್ಷಾ ದಳದ ತಂಡದೊಂದಿಗೆ ಸಮಾಜ ಸೇವಕ ರಾಜು ದೋಹರ್ ಹಾಗೂ ಅವರ ಸಮಾಜ ಸೇವಕರು ಸ್ಥಳಕ್ಕೆ ಆಗಮಿಸಿದ್ದಾರೆ.
ಇನ್ನು ಪಶುಸಂಗೋಪನಾ ಇಲಾಖೆಯಿಂದ ದೊಡ್ಡ ಹೈಡ್ರಾಲಿಕ್ ಕ್ರೇನ್ ಅನ್ನು ತರಿಸಲಾಗಿದ್ದು, ಮೇಲ್ಛಾವಣಿಯಲ್ಲಿದ್ದ ಜನರು ಮೊದಲು ಗೂಳಿಯನ್ನು ಹಗ್ಗದಿಂದ ಕಟ್ಟಿ ನಿಯಂತ್ರಿಸಿದರು. ನಂತರ ಪಶುಸಂಗೋಪನಾ ಇಲಾಖೆಯ ಡಾ. ಸುರೇಂದ್ರ ನಾಯ್ನ್ ಅವರು ಗೂಳಿಗೆ ಪ್ರಜ್ಞೆ ತಪ್ಪಲು ಎರಡು ಲಸಿಕೆಗಳನ್ನು ನೀಡಿದರು. ಇದರಿಂದ ಆ ಗೂಳಿಯನ್ನು ನೆಲಕ್ಕೆ ಇಳಿಸುವುದು ಸುಲಭವಾಯಿತು.
ಗೂಳಿ ಮೂರ್ಛೆ ಹೋದ ಸ್ಥಳೀಯ ಜನರು ಅದನ್ನು ಬಲವಾದ ಬೆಲ್ಟ್ಗಳಲ್ಲಿ ಕಟ್ಟಿದ್ದು, ಬಳಿಕ ಅದನ್ನು ಕ್ರೇನ್ ಮೂಲಕ ಸುಲಭವಾಗಿ ಕೆಳಕ್ಕೆ ಇಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದಿತ್ತು.