ಮುಂಬೈ, ಜು 19 (DaijiworldNews/HR): ಇತಿಹಾಸದಲ್ಲಿ ಮೊದಲ ಬಾರಿಗೆ ಅಮೇರಿಕಾದ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.80ರ ಗಡಿ ಇಂದು ತಲುಪಿದೆ.
ಭಾರತೀಯ ಕರೆನ್ಸಿ ಪ್ರಕಾರ ಒಂದು ಅಮೆರಿಕನ್ ಡಾಲರ್ ಮೌಲ್ಯ ರೂ.80. ಅಂದರೆ ಅಮೇರಿಕಾದಲ್ಲಿರುವ ಯಾರಿಗಾದರೂ 1000 ಡಾಲರ್ ಕಳುಹಿಸಲು ಭಾರತೀಯರು 80,000 ರೂ. ವ್ಯಯಿಸಬೇಕು.
ವಿದೇಶಿ ಮಾರುಕಟ್ಟೆಯಲ್ಲಿ ಸ್ಥಿರವಾದ ಯುಎಸ್ ಡಾಲರ್ ಮತ್ತು ಬಂಡವಾಳದ ಹೊರಹರಿವಿನ ಹೆಚ್ಚಳದಿಂದಾಗಿ ರೂಪಾಯಿ ಮೌಲ್ಯವು ಕಡಿಮೆ ಮಟ್ಟಕ್ಕೆ ಕುಸಿದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ.
ಇನ್ನು ರೂಪಾಯಿ ದುರ್ಬಲವಾದರೆ ಆಮದು ಹೊರೆಯಾಗಲಿದ್ದು, ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಡಾಲರ್ನಲ್ಲಿ ಪಾವತಿಸಿದರೆ, ನಾವು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.
ರೂಪಾಯಿ ಕುಸಿತದಿಂದ ಕೆಲವು ವಲಯಗಳಿಗೆ ಲಾಭ ಉಂಟಾಗಲಿದೆ, ರಫ್ತು ಮಾಡುವ ವಲಯಗಳಿಗೆ ಡಾಲರ್ಗಳಲ್ಲಿ ಪಾವತಿಸಲಾಗುತ್ತದೆ ಆದ್ದರಿಂದ ಆ ಕಂಪನಿಗಳಿಗೆ ಲಾಭವಿದೆ.