ನವದೆಹಲಿ, ಜು 18 (DaijiworldNews/HR): ಒಡಿಶಾದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಅವರು ಎನ್ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಮೊಹಮ್ಮದ್ ಮೊಕ್ವಿಮ್, ನಾನು ನನ್ನ ಆತ್ಮಸಾಕ್ಷಿಯ ಆದೇಶದಂತೆ ಮತ ಚಲಾಯಿಸಿದ್ದೇನೆ ಮತ್ತು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಣ್ಣಿನ ಮಗಳನ್ನು ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಒಡಿಶಾದ ಜನ ನನ್ನ ನಿರ್ಧಾರವನ್ನು ಬೆಂಬಲಿಸುತ್ತಾರೆ, ನನ್ನ ಮತದಿಂದ ದ್ರೌಪದಿ ಮುರ್ಮು ಅವರ ಗೆಲುವಿನ ಅಂತರ ಹೆಚ್ಚಾದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.