ಬಿಹಾರ, ಜು 18 (DaijiworldNews/HR): ಬಿಹಾರದ ಸಿವಾನ್ನ ಬಾಬಾ ಮಹೇಂದ್ರನಾಥ್ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಸಮೀಪದ ಗ್ರಾಮಗಳ ನಿವಾಸಿಗಳಾದ ಲೀಲಾವತಿ ದೇವಿ (42) ಮತ್ತು ಸುಹಾಮತಿ ದೇವಿ (40) ಎಂದು ಗುರುತಿಸಲಾಗಿದೆ.
ಮೊದಲ ಸೋಮವಾರದಂದು ಪ್ರಾರ್ಥನೆ ಸಲ್ಲಿಸಲು ಭಕ್ತರು ಬಂದಿದ್ದರಿಂದ ದೇವಾಲಯದ ಆವರಣವು ತುಂಬಿದ್ದು, ಭಕ್ತರ ನೂಕುನುಗ್ಗಲಿನಿಂದಾಗಿ ಆವರಣದೊಳಗೆ ಗದ್ದಲ ನಡೆದಿದೆ.
ಇನ್ನು ಇಬ್ಬರು ಮಹಿಳೆಯರು ನೆಲಕ್ಕೆ ಬಿದ್ದು ಜನಸಮೂಹದಿಂದ ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ.