ಬೆಂಗಳೂರು, ಜು 18 (DaijiworldNews/HR): ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಅಥವಾ ವ್ಯಾಕರಣದಲ್ಲಿ ದೋಷವಾದರೆ, ಸಂಬಳದಲ್ಲಿ ಕಡಿತವಾಗಲಿದೆ, ಮುಂಬಡ್ತಿ ಕೂಡಾ ನಿರಾಕರಿಸಲಾಗುವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದೆ.
ವಿಧಾನಸಭೆ ಹಾಗೂ ವಿಧಾನಮಂಡದಲ್ಲಿ, ವಿಧಾನಪರಿಷತ್ನಲ್ಲಿ ಹೊಸ ಕಾಯ್ದೆ ಜಾರಿಯಾಗಿ ಅನುಷ್ಠಾನಕ್ಕೆ ಬಂದರೆ ಆಕಸ್ಮಿಕವಾಗಿ ಇಲ್ಲವೇ ಕಣ್ತಪ್ಪಿಯೋ ಹಾಗೂ ದುರುದ್ದೇಶಪೂರ್ವಕವಾಗಿ ಸರ್ಕಾರದ ಸುತ್ತೋಲೆಗಳಲ್ಲಿ ಕನ್ನಡವನ್ನು ಅಪಮಾನಿಸಿದರೆ ಅಂಥವರ ವೇತನ ಕಡಿತ, ಮುಂಬಡ್ತಿಗೆ ತಡೆ ಹಾಗೂ ಕೆಲವು ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ಕುಮಾರ್ ಅವರು ನಿಯಮಗಳಿಗೆ ತಿದ್ದುಪಡಿ ಮಾಡಿ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ಅಗತ್ಯ ಸಿದ್ದತೆಗಳನ್ನುಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.