ಬೆಂಗಳೂರು, ಜು 18 (DaijiworldNews/MS): ಕೇಂದ್ರದ ನೂತನ GST ನೀತಿ ಜಾರಿ ಬೆನ್ನಲ್ಲೇ ಕೆಎಂಎಫ್ ಉತ್ಪನ್ನಗಳಾದ ಮೊಸರು, ಮಜ್ಜಿಗೆ , ಲಸ್ಸಿ ಗಳ ಬೆಲೆ ಏರಿಕೆ ಕಂಡಿದೆ. ಕೇಂದ್ರದ ನೂತನ ಜಿಎಸ್ ಟಿ ನೀತಿ ಜಾರಿ ಹಿನ್ನೆಲೆ ಬೆಲೆ ಏರಿಕೆ ಮಾಡಲಾಗಿದ್ದು, ಜು.18 ರ ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಹೀಗಾಗಿ ನಂದಿನಿ ಉತ್ಪನ್ನಗಳು ಜನಸಾಮಾನ್ಯರ ಜೇಬನ್ನು ಸುಡಲು ಆರಂಭಿಸಲಿದೆ.
ಒಂದು ಲೀಟರ್ ಮೊಸರಿಗೆ 3 ರೂಪಾಯಿ ಹೆಚ್ಚಳ, ಮಜ್ಜಿಗೆ 200ಎಂಎಲ್ ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200ಎಂಎಲ್ ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 5 ರೂ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಾಲು ಒಕ್ಕೂಟಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಮಾತ್ರವಲ್ಲದೇ ಕೆಎಂಎಫ್ ಹಾಲಿನ ದರ ಏರಿಕೆಗೆ ಕೆಎಂಎಫ್ ಅಸ್ತು ಎಂದಿದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು ಕೆಎಂಎಫ್ ಉತ್ಪನ್ನಗಳ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿನಿ ಹಾಲು-ಮೊಸರು ಬೆಲೆ ಇಳಿಕೆಗೆ ಕೆಎಂಎಫ್ಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.