ನವದೆಹಲಿ, ಜು 18 (DaijiworldNews/MS): ಸಂಸತ್ತಿನ ಎಲ್ಲಾ ಸದಸ್ಯರು ದೇಶದಲ್ಲಿ ಹೊಸ ಶಕ್ತಿಯನ್ನು ಹೆಚ್ಚಿಸುವ ಮಾಧ್ಯಮವಾಗಬೇಕು ಎಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಭವನ ಮುಡೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ," ಈ ಅಧಿವೇಶನ ಬಹಳ ಮಹತ್ವದ್ದಾಗಿದೆ ಸಂಸತ್ತಿನ ಎಲ್ಲಾ ಸದಸ್ಯರು ದೇಶದ ಹೊಸ ಶಕ್ತಿಯನ್ನು ಹೆಚ್ಚು ಮಾಡೂವ ಮಾಧ್ಯಮವಾಗಬೇಕು. ಇದು ರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಸಮಯ. ಈ ಯುಗ ನಮಗೆ ಹೊಸ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯನ್ನು ನೀಡಲಿದೆ" ಎಂದಿದ್ದಾರೆ.
ಮಾತ್ರವಲ್ಲದೆ ಇದು ಆಜಾದಿ ಕಾ ಅಮೃತ ಮಹೋತ್ಸವದ ಅವಧಿ. 15ನೇ ಆಗಸ್ಟ್ ಮತ್ತು ಮುಂಬರುವ 25 ವರ್ಷಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಯಾಕೆಂದರೆ ರಾಷ್ಟ್ರವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ, ನಮ್ಮ ಪ್ರಯಾಣ ಮತ್ತು ನಾವು ಏಳಿಗೆಯನ್ನು ನಿರ್ಧರಿಸಲು ಸಂಕಲ್ಪ ಮಾಡುವ ಸಮಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.