ಚಿಕ್ಕಮಗಳೂರು, ಜು 17 (DaijiworldNews/HR): ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಘಟನೆ ಚಾರ್ಮಾಡಿ ಘಾಟ್ನ ಸೋಮನಕಾಡು ಸಮೀಪ ಭಾನುವಾರ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ಯಾಂಟರ್ ವಾಹನ ಚಾರ್ಮಾಡಿ ಘಾಟ್ ನ ಸೋಮನಕಾಡಿನಲ್ಲಿ ಭಾರಿ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗೆ ಉರುಳಿ ಬಿದ್ದಿದ್ದು, ಕ್ಯಾಂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಈ ಕ್ಯಾಂಟರ್ ಒಂದು ವೇಳೆ ಬಲ ಬದಿಗೆ ಬಿದ್ದಿದ್ರೆ ಪ್ರಪಾತಕ್ಕೆ ಉರುಳುತ್ತಿತ್ತು ಎನ್ನಲಾಗಿದೆ.