ದಾವಣಗೆರೆ, ಜು 17 (DaijiworldNews/HR): ಬಿಜೆಪಿ ಪಕ್ಷದ ಹಿರಿಯ ನಾಯಕರಿಗೆ ತ್ಯಾಗ ಮನೋಭಾವನೆ ಕಡಿಮೆ ನಮ್ಮ ಹಿರಿಯ ಸಚಿವರು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಕಿಡಿ ಕಾರಿದ್ದಾರೆ.
ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಕಿಡಿ ಕಾರಿರುವ ಅವರು, ನಮ್ಮ ಪಕ್ಷದ ಹಿರಿಯ ಸಚಿವರು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದು, ಇನ್ನಾದರೂ ಸ್ವಲ್ಪ ಕೆಲಸ ಮಾಡಿ. ಅಂತಹ ದೊಡ್ಡ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ, ಆದರೆ ಹಿರಿಯ ಸಚಿವರಿಗೆ ಏನಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿಜೆಪಿಯ ಹಿರಿಯ ಸಚಿವರು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದು, ಬಿಜೆಪಿ ಸರ್ಕಾರ ಬಂದರೆ ಇವರಷ್ಟೇ ಸಚಿವರಾಗಬೇಕಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.