ಧೆಂಕನಲ್, ಜು 17 (DaijiworldNews/HR): ಒಡಿಶಾದ ಧೆಂಕನಲ್ ಜಿಲ್ಲೆಯ ಗಾಂಡಿಯಾ ಪೊಲೀಸ್ ವ್ಯಾಪ್ತಿಯ ಚಂದ್ರಶೇಖರ್ ಪುರ ಗ್ರಾಮದಲ್ಲಿ ಅಕ್ರಮ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ ಸುಮಾರು 12 ಕಿಲೋಮೀಟರ್ ದೂರ ನಡೆದಿರುವ ಘಟನೆ ನಡೆದಿದೆ.
ಆರೋಪಿಯನ್ನು ನಕಾಫೋಡಿ ಮಾಝಿ ಮತ್ತು ಮೃತ ಮಹಿಳೆಯನ್ನು ಸುಚಲಾ ಮಾಝಿ ಎಂದು ಗುರುತಿಸಲಾಗಿದೆ.
ಪರ ಪುರುಷನೊಂದಿಗಿನ ಅನೈತಿಕ ಸಂಬಂಧದ ಶಂಕೆಯ ಮೇಲೆ ಆರೋಪಿ ತನ್ನ ಹೆಂಡತಿಯ ತಲೆಯನ್ನು ಕತ್ತರಿಸಿ ಕೊಂದ ಬಳಿಕ ಅವಳ ತಲೆಯನ್ನು 12 ಕಿಲೋಮೀಟರ್ ನಡೆದಿದ್ದು, ಈ ವೇಳೆ ಜಂಘೀರಾದಲ್ಲಿ ಸ್ಥಳೀಯರು ತಡೆದು ಜಂಘೀರಾ ಸದರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಗಾಂಡಿಯಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕತ್ತರಿಸಿದ ತಲೆಯನ್ನು ವಶಪಡಿಸಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.