ಬೆಂಗಳೂರು, ಜು 17 (DaijiworldNews/HR): ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಬಾಲಕನೊಬ್ಬನನ್ನು ನಾಲ್ವರು ಸೇರಿ ಕೊಲೆಗೈದಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಬನಶಂಕರಿ ನಿವಾಸಿ ಪ್ರಜ್ವಲ್ (17) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಯುವಕ ಬನಶಂಕರಿಯಲ್ಲಿ ಹಳೇ ಪೇಪರ್ ಆಯುವ ಕೆಲಸ ಮಾಡುತ್ತಿದ್ದು, ಪ್ರಜ್ವಲ್ ದೂರದ ಸಂಬಂಧಿ ನಾಗೇಂದ್ರ ಅವರ ಸಹೋದರನ ಪುತ್ರಿಗೆ ಕರೆ ಮಾಡಿ ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈ ವಿಚಾರವನ್ನು ಯುವತಿ ತನ್ನ ಪೋಷಕರಿಗೆ ಹೇಳಿದ್ದರು.
ಇನ್ನು ಆರೋಪಿ ನಾಗೇಂದ್ರ ಮತ್ತು ಆತನ ನಾಲ್ವರು ಸಹಚರರು ಶುಕ್ರವಾರ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಪ್ರಜ್ವಲ್ನನ್ನು ಕರೆಸಿಕೊಂಡು ಬಳಿಕ ಎಚ್ಚರಿಕೆ ನೀಡುವ ಭರದಲ್ಲಿ ದೊಣ್ಣೆಯಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.