ನವದೆಹಲಿ, ಜು 17 (DaijiworldNews/DB): ರಾಷ್ಟ್ರಪತಿ ಭವನದಲ್ಲಿ ಮೂರ್ತಿ ಇರಬೇಕಾದುದಲ್ಲ. ರಾಷ್ಟ್ರಪತಿ ಇರಬೇಕು ಎಂದು ಬಿಹಾರದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಪಟ್ನಾದಲ್ಲಿ ಮಾತನಾಡಿದ ಅವರು, ಯಶವಂತ್ ಸಿನ್ಹಾ ಅವರು ಮಾತನಾಡುವುದನ್ನು ಕೇಳಿದ್ದೇವೆ. ಆದರೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮಾತನಾಡಿರುವುದನ್ನು ಕೇಳೇ ಇಲ್ಲ. ಅವರು ಅಭ್ಯರ್ಥಿಯೆಂದು ಘೋಷಣೆಯಾದ ಬಳಿಕ ಇಲ್ಲಿವರೆಗೆ ಒಮ್ಮೆಯೂ ಅವರು ಮಾಧ್ಯಮಗಳ ಮುಂದೆ ಮಾತನಾಡಿರುವುದನ್ನು ನಾವ್ಯಾರೂ ನೋಡಿಲ್ಲ ಎಂದರು.
ಜುಲೈ 18ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 21ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.