ಲಕ್ನೋ,, ಜು 17 (DaijiworldNews/DB): ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಎಬ್ಬಿಸಲು ಸಂಚು ರೂಪಿಸಿ ತಲೆಮರೆಸಿಕೊಂಡಿದ್ದ ಪಿಎಫ್ಐ ಸಂಘಟನೆಯ ಕಾರ್ಯಕರ್ತನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಮೋದಿ ಕಾರ್ಯಕ್ರಮದಲ್ಲಿ ಗಲಭೆ ಎಬ್ಬಿಸಲು ಸಂಚು ರೂಪಿಸಿದ ಆರೋಪದಲ್ಲಿ ಬಿಹಾರದ ಫುಲ್ವಾರಿ ಷರೀಫ್ನಲ್ಲಿ ದರ್ಭಾಂಗದ ನಿವಾಸಿ ನೂರುದ್ದೀನ್ ಜಂಗಿ ಅಲಿಯಾಸ್ ಅಡ್ವೊಕೇಟ ನೂರುದ್ದೀನ್ ಮೇಲೆ ಪ್ರಕರಣ ದಾಖಲಾಗಿತ್ತು. ಕೂಡಲೇ ಪಾಟ್ನಾದ ಹಿರಿಯ ಪೊಲೀಸರು ಕಾರ್ಯಾಚರಣೆಗಿಳಿದಿದ್ದರಾದರೂ, ಆತ ತಪ್ಪಿಸಿಕೊಂಡಿದ್ದ. ಇದೀಗ ಶುಕ್ರವಾರ ರಾತ್ರಿ ಲಕ್ನೋದ ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರೋ ನಿಲ್ದಾಣದ ಬಳಿ ಉತ್ತರ ಪ್ರದೇಶ ಎಟಿಎ ಸ್ಪಡೆ ಆತನನ್ನು ವಶಕ್ಕೆ ಪಡೆದುಕೊಂಡಿದೆ.
ಜಂಗಿ ಮತ್ತಾತನ ಸಹಚರರು ಬಿಹಾರದಲಲ್ಇ ಮೋದಿ ರ್ಯಾಲಿಯಲ್ಲಿ ಗಲಭೆ ಸೃಷ್ಟಿಯಲ್ಲಿ ಯತ್ನಿಸಿದ್ದರು ಎಂದು ಬಿಹಾರ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. 2015ರಿಂದ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಾಗಿ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ.