ಬೆಳಗಾವಿ, ಜು 17 (DaijiworldNews/HR): ಬಿಜೆಪಿ ಕಾರ್ಯಕರ್ತನೊರ್ವನನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದದೆ.
ಹಿಡಕಲ್ ಡ್ಯಾಂ ಗ್ರಾಮದ ಬಿಜೆಪಿ ಕಾರ್ಯಕರ್ತ ಪರಶುರಾಮ್ ಹಲಕರ್ಣಿ (32) ಹತ್ಯೆಯಾದ ವ್ಯಕ್ತಿ.
ಇನ್ನು ಪರಶುರಾಮ್ ಅವರು ಹಿಡಕಲ್ ಡ್ಯಾಂ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿನಾಗಿದ್ದು, ಈತನನ್ನು ಗ್ರಾಮದ ಹನುಮಂತ ದೇವಸ್ಥಾನದ ಬಳಿ ಮೂವರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಆರೋಪಿಗಳಾದ ಮಂಜುನಾಥ ಪುಟಜನೆ ಮತ್ತು ಕೆಂಪಣ್ಣ ನೆಸರಗಿ ಪೋಲಿಸರಿಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿ ಬಸವರಾಜ್ ಪರಾರಿಯಾಗಿದ್ದಾನೆ.
ಈ ಬಗ್ಗೆ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.