ಮಡಿಕೇರಿ, ಜು 17 (DaijiworldNews/HR): ನಗರದ ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ತಡೆಗೋಡೆ ಕುಸಿಯುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ರಸ್ತೆ ಸೂಚಿಸಿದ್ದು, ಮಡಿಕೇರಿ – ಮಂಗಳೂರಿಗೆ ತೆರಳುವವರು ಹಾಗೂ ಮಡಿಕೇರಿ- ಮಂಗಳೂರಿನಿಂದ ಬರುವವರು ಮೇಕೆರಿ – ತಾಳತ್ತಮನೆ – ಅಪ್ಪಂಗಳ ಮಾರ್ಗವಾಗಿ ಹೋಗುವಂತೆ ಸೂಚಿಸಲಾಗಿದೆ.
ಇನ್ನು ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮಂಗಳೂರು ರಸ್ತೆ ಬಂದ್ ಮಾಡಿ, ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗ ಬಂದ್ ಮಾಡಲಾಗಿದೆ.