ಬಾಗಲಕೋಟೆ, ಜು 16 (DaijiworldNews/DB): ಸಿದ್ದರಾಮಯ್ಯನವರು ನೀಡಿದ ಹಣವನ್ನು ಮಹಿಳೆ ಎಸೆದಿರುವುದರ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪ ಆಪಾದಿಸಿದ್ದಾರೆ.
ಇಳಕಲ್ ನಲ್ಲಿ ಮಾತನಾಡಿದ ಅವರು, ನಾನೂ ನಿನ್ನೆ ಸಿದ್ದರಾಮಯ್ಯ ಜೊತೆಗಿದ್ದೆ. ಅಲ್ಲಿ ಎಸ್ ಡಿಪಿಐ ವ್ಯಕ್ತಿಯೊಬ್ಬನನ್ನು ನೋಡಿದ್ದೇನೆ. ಮಹಿಳೆ ಹಣ ಎಸೆಯಲು ಆತನೇ ಪ್ರೇರಣೆ ನೀಡಿದ್ದಾನೆ. ಅಲ್ಲದೆ ಘಟನೆ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದರು.
ಗಾಯಾಳುಗಳೆಲ್ಲರು ಸಿದ್ದ ರಾಮಯ್ಯ ನವರೊಂದಿಗೆ ಉತ್ತಮವಾಗಿ ಮಾತನಾಡಿದರು. ಅಲ್ಪಸಂಖ್ಯಾತರೆಲ್ಲರೂ ಸಿದ್ದರಾಮಯ್ಯ ಅವರೊಂದಿಗಿದ್ದಾರೆ. ಸಿದ್ದರಾಮಯ್ಯ ಅವರು ಯಾರನ್ನೂ ನೋಡುವುದಕ್ಕೆ ಬರುವುದು ಬೇಡ ಎನ್ನುವ ಹಿಂದೂ ಕಾರ್ಯಕರ್ತ ಅರುಣ ಕಟ್ಟಿಮನಿ ಯಾವ ದೊಣ್ಣೆ ನಾಯಕ ಎಂದು ಪ್ರಶ್ನಿಸಿದರು.
ನಿನ್ನೆ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ನೀಡಿದ್ದ ಎರಡು ಲಕ್ಷ ರೂ. ಪರಿಹಾರ ಹಣವನ್ನು ತೀರಸ್ಕರಿಸಿ ಮುಸ್ಲಿಂ ಮಹಿಳೆ ಸಿದ್ದರಾಮಯ್ಯ ಅವರ ವಾಹನದ ಕಡೆಗೆ ಎಸೆದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗಿತ್ತು.