ಹಾಸನ, ಜು 16 (DaijiworldNews/HR): ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ನಲ್ಲಿ ಮತ್ತೆ ಭೂಕುಸಿತ ಗೊಂಡಿದ್ದು, ಹಾಸನದ ರಿಂಗ್ ರಸ್ತೆಯಲ್ಲಿ ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ಸಂಜೆಯಿಂದ ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಲ್ಲೇ ವಾಹನಗಳು ನಿಂತಿದ್ದು, ನಮಗೆ ಪರ್ಯಾಯ ದಾರಿ ಕೊಡಿ ಇಲ್ಲವೇ ಇದೇ ಮಾರ್ಗದಲ್ಲಿ ಕಳುಹಿಸಿ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ಬಾರಿ ಸುರಿದ ಮಳೆಗೆ ಶಿರಾಡಿ ಘಾಟ್ನಲ್ಲಿ ಮೂರರಿಮ್ದ ನಾಲ್ಕು ಬಾರಿ ಭೂಕುಸಿತ ಉಂಟಾಗಿದ್ದು, ಭಾರೀ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.