ಕೊಡುಗು, ಜು 16 (DaijiworldNews/HR): ಕೊಡಗಿನಲ್ಲಿ ಮಳೆಗೆ ಮೊದಲ ಬಲಿಯಾಗಿದ್ದು, ಜುಲೈ 5ರಂದು ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಇಂದು ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿದೆ.
ಮೃತಪಟ್ಟ ವೃದ್ಧೆಯನ್ನು ಸೋಮವಾರ ಪೇಟೆ ತಾಲೂಕಿನ ಸುಳುಗಳಲೆ ಗ್ರಾಮದ ವಸಂತಮ್ಮ ಎಂದು ಗುರುತಿಸಲಾಗಿದೆ.
ಇನ್ನು ಜುಲೈ 5ರಂದು ಭಾರೀ ಮಳೆಯ ಆರ್ಭಟಕ್ಕೆ ಮನೆಯ ಗೋಡೆ ಕುಸಿದು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.