ಬೆಂಗಳೂರು, ಜು 16 (DaijiworldNews/HR): ಶಿವಾಜಿನಗರದ ಹೆಚ್ಬಿಎಸ್ ಆಸ್ಪತ್ರೆ ಬಳಿ ಕತ್ತು ಕತ್ತರಿಸಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಪ್ರೀತಿಸಿದ ಯುವತಿಗೆ ಮದುವೆಯಾಗಿದ್ದರೂ ಹಿಂದೆ ಸುತ್ತುತ್ತಿದ್ದ, ಪದೇಪದೇ ಮನೆ ಬಳಿ ಸುಳಿದಾಡುತ್ತಿದ್ದ ಹಿನ್ನೆಲೆ ಜವಾದ್ ಪ್ರಿಯತಮೆಯ ಪತಿಯಿಂದ ಬರ್ಬರ ಹತ್ಯೆ ಮಾಡಲಾಗಿದೆ.
ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.