ನಿಡಗುಂದಿ, ಜು 16 (DaijiworldNews/MS): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಳೆದ ಮೂರು ದಿನಗಳಿಂದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದಾರೆ.
ಇದರ ಭಾಗವಾಗಿ ಶುಕ್ರವಾರ ಪ್ರವಾಹ ಪೀಡಿತ ಪ್ರದೇಶವಾದ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿಗೆ ಹೋಗಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯನವರನು ನೋಡಲು ಅಭಿಮಾನಿಗಳ ಬಳಗದ ದಂಡೇ ಹರಿದು ಬಂದಿತ್ತು. ಈ ವೇಳೆ ಅಭಿಮಾನಿಗಳು ಹೂವಿನ ಹಾರ ಹಾಕಲು ಮುಂದೆ ಬಂದಿದ್ದಾರೆ ಆದರೆ ಹೂವಿನ ಹಾರ ಹಾಕಲು ಬಂದ ಅಭಿಮಾನಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಹಾರದಲ್ಲಿ ಹುಳ ಇರುತ್ತಯ್ಯ, ಹೂವಿನ ಹಾರ ಹಾಕಬೇಡಿ ಹೂವುಗಳನ್ನು ತರಬೇಡಿ ಎಂದು ಕೈ ಮುಗಿದು ವಿನಂತಿಸಿಕೊಂಡಿದ್ದಾರೆ.