ಕಾರವಾರ, ಜು 15 (DaijiworldNews/HR): ಕಾರವಾರದ ಹಿರಿಯ ಸಿವಿಲ್ ನ್ಯಾಯಾಲಯವು ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿಗೆ 25,500 ರೂ ದಂಡವನ್ನು ವಿಧಿಸಿದೆ.
ಬಾಲಕ ನಗರದಲ್ಲಿ ಸ್ಕೂಟಿ ಚಲಾಯಿಸುವಾಗ ಸಂಚಾರ ಪೊಲೀಸರು ತಡೆದು ಪ್ರಕರಣ ದಾಖಲಿಸಿ, ಆತನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಅವನ ತಾಯಿ ರೇಷ್ಮಾ ಅಲಿ ಶೇಖ್ ಅವರಿಗೆ 25 ಸಾವಿರ ದಂಡ ವಿಧಿಸಿದ್ದಾರೆ.
ಇನ್ನು ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುವ ಪಾಲಕರಿಗೆ ದಂಶ ವಿಧೀಸುವ ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.