ಬೆಂಗಳೂರು, ಜು 15 (DaijiworldNews/MS): ದೇಶವನ್ನು ಛಿದ್ರಗೊಳಿಸಲು ಬಾಹ್ಯ ಶಕ್ತಿಗಳ ಆಹ್ವಾನಿಸುವುದಕ್ಕೂ ಪಿಎಫ್ಐ ದುಷ್ಟರು ಹೇಸುತ್ತಿಲ್ಲ. ಇಂಥ ಪಿಎಫ್ಐ ಉಗ್ರರಿಗೆ ಸಹಾಯ ’ಹಸ್ತ ’ ಯಾರದ್ದು? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪಿಎಫ್ಐ ಉಗ್ರರ ರಹಸ್ಯ ಕಾರ್ಯಸೂಚಿಯಲ್ಲಿ ಏನಿದೆಯೋ, ಅದೇ ನೆಲೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ. ಕಾಂಗ್ರೆಸ್ ಹಾಗೂ ಪಿಎಫ್ಐ ಆಳ-ಅಗಲದ ಬಗ್ಗೆ ಸಿದ್ದರಾಮಯ್ಯ & ಡಿಕೆಶಿ ಬಳಗಕ್ಕೆ ಸ್ಪಷ್ಟ ಮಾಹಿತಿ ಇರಬಹುದೇ ಎಂದು ಪ್ರಶ್ನಿಸಿದೆ.
ಸಂವಿಧಾನ, ಅಂಬೇಡ್ಕರ್ ಹಾಗೂ ರಾಷ್ಟ್ರ ಧ್ವಜವನ್ನು ತಮ್ಮ ಹಿಡನ್ ಅಜೆಂಡಾಕ್ಕೆ ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ ಉಗ್ರರು ಸಂಚು ನಡೆಸಿದ್ದಾರೆ.ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ. ಇವರಿಗೆ ಸಹಾಯ ’ಹಸ್ತ ’ ಯಾರದ್ದು ಎಂದು ಕೇಳಿದೆ
ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವುದಕ್ಕಾಗಿ ಪಿಎಫ್ಐ ಉಗ್ರರು ಮೂರು ಹಂತದ ಯೋಜನೆ ರೂಪಿಸಿರುವುದು ಈಗ ಬಯಲಾಗಿದೆಗುಪ್ತ ಸಶಸ್ತ್ರ ಪಡೆ ರಚಿಸಿ ವಿರೋಧಿಗಳ ನಿರ್ನಾಮ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದು ಯಾರಿಗೆ?ಇದೆಲ್ಲದ್ದರಲ್ಲೂ ಹಸ್ತ'ಸಹಕಾರವಿದೆಯೇ್ ಎಂದು ಅನುಮಾನ ವ್ಯಕ್ತಪಡಿಸಿದೆ.