ನವದೆಹಲಿ, ಜು 15 (DaijiworldNews/HR): ಐದು ವರ್ಷಗಳಲ್ಲಿ ನಿರುದ್ಯೋಗ ದ್ವಿಗುಣಗೊಂಡಿದ್ದು, ಮೋದಿ ಸರ್ಕಾರವು ಭಾರತದ ಯುವ ಜನತೆಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 2017-18 ರಿಂದ 2021-22 ರವರೆಗೆ ಐದು ವರ್ಷಗಳಲ್ಲಿ ನಿರುದ್ಯೋಗ ದ್ವಿಗುಣಗೊಂಡಿದೆ ಎಂದು ತೋರಿಸಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ದತ್ತಾಂಶವನ್ನು ಆಧರಿಸಿದ ಗ್ರಾಫ್ ಅನ್ನು ಶೇರ್ ಮಾಡಿದ್ದಾರೆ .
ಇನ್ನು ಭಾರತದ ನಿರುದ್ಯೋಗಿ ಯುವಕರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ನಿಮ್ಮ ಸುಳ್ಳು ಭರವಸೆ ದಾರಿ ತಪ್ಪಿಸುವ, ದ್ರೋಹ ಬಗೆದ ಮತ್ತು ವಂಚಿಸಿದ ಎಂಬ "ಅಸಂಸದೀಯ" ಪದಗಳನ್ನು ಬಳಸಬಹುದೇ ಎಂದು ಪ್ರಶ್ನಿಸಿದ್ದಾರೆ.