ಬೆಂಗಳೂರು, ಜು 15 (DaijiworldNews/MS): "ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ" ಎಂದು ಬಿಜೆಪಿ ರಾಜ್ಯ ಘಟಕ ವ್ಯಂಗ್ಯವಾಡಿದೆ.
ಬಾದಾಮಿ ತಾಲೂಕಿನ ಕೆರೂರಿನಲ್ಲಿ ಮಹಿಳೆ ಹಣ ಎಸೆದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , " ವಿರೋಧ ಪಕ್ಷದ ನಾಯಕರೇ,ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ.ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ?ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು" ಎಂದು ಕುಹಕವಾಡಿದೆ.
"ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ. ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ" ಎಂದು ಹೇಳಿದೆ.