ನವದೆಹಲಿ, ಜು 15 (DaijiworldNews/DB): ಬೆಳಗ್ಗೆ ಏಳು ಗಂಟೆಗೆ ಮಕ್ಕಳು ಶಾಲೆಗೆ ಹೊರಡುತ್ತಾರೆ. ಅಂತದ್ದರಲ್ಲಿ ವಕೀಲರು ತಮ್ಮ ಕೆಲಸವನ್ನು ಬೆಳಗ್ಗೆ 9 ಗಂಟೆಗೇ ಯಾಕೆ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಜಡ್ಜ್ ಯು.ಯು. ಲಲಿತ್ ಅಭಿಪ್ರಾಯಪಟ್ಟಿದ್ದಾರೆ.
ಜಾಮೀನು ಅರ್ಜಿ ಕುರಿತ ವಿಚಾರಣೆಯೊಂದಕ್ಕೆ ಸಂಬಂಧಿಸಿದಂತೆ ದೈನಂದಿನ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಬೆಳಗ್ಗೆ 9.30ಕ್ಕೆ ಕೋರ್ಟ್ ಕಾರ್ಯಾರಂಭ ಮಾಡಿರುವುದಕ್ಕೆ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಶ್ಲಾಘಿಸಿ ಮಾತನಾಡಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಜಡ್ಜ್ ಯು.ಯು. ಲಲಿತ್, ಮಕ್ಕಳು ಏಳು ಗಂಟೆಗೇ ಶಾಲೆಗೆ ಹೊರಡುತ್ತಾರೆ. ಹಾಗೆಂದ ಮೇಲೆ ನ್ಯಾಯವಾದಿಗಳು ಬೆಳಗ್ಗೆ 9 ಗಂಟೆಗೇ ಕೆಲಸ ಆರಂಭಿಸಬಹುದು. ನಾವು ಯಾಕೆ ಹಾಗೆ ಮಾಡಬಾರದು? ನಾವೂ ಬೆಳಗ್ಗೆ ಬೇಗ ಕೆಲಸ ಆರಂಭಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.