ನವದೆಹಲಿ, ಜು 15 (DaijiworldNews/DB): ನ್ಯಾಯಾಂಗ ಬಂಧನಕ್ಕೊಳಗಾಗಿರುವ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಜುಬೇರ್ ಮೊಹಮ್ಮದ್ ಗೆ 50,000 ರೂ. ವೈಯಕ್ತಿಕ ಜಾಮೀನು ಬಾಂಡ್ ಮೇಲೆ ಪಟಿಯಾಲ ಹೌಸ್ ಕೋರ್ಟ್ನ ಸೆಷನ್ಸ್ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ ಇನ್ನೂ ಎರಡು ಕೇಸ್ಗಳು ಆತನ ಮೇಲೆ ದಾಖಲಾಗಿರುವುದರಿಂದ ಜಾಮೀನು ಮಂಜೂರಾದರೂ ಸದ್ಯ ಕಾರಾಗೃಹದಲ್ಲೇ ಇರಬೇಕಾಗುತ್ತದೆ.
2018ನಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಜುಬೇರ್ಗೆ ಜಾಮೀನು ಮಂಜೂರಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಜುಬೇರ್ ವಿರುದ್ದ ಇನ್ನೆರಡು ಕೇಸ್ಗಳು ದಾಖಲಾಗಿರುವುದರಿಂದ ಆತ ಇನ್ನೂ ಜೈಲಿನಲ್ಲಿರುವುದು ಅನಿವಾರ್ಯವಾಗಲಿದೆ ಎನ್ನಲಾಗಿದೆ.
ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಆರು ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಅವರು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.