ಬೆಂಗಳೂರು, ಜು 15 (DaijiworldNews/DB): ಚಾರ್ಲಿಗೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯವಂತಿಕೆ ತೋರಲು ಕಷ್ಟವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ಗೆ 5 ರೂ. ಮತ್ತು ಡೀಸೆಲ್ ಗೆ 3 ರೂ. ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಚಾರ್ಲಿ ಸಿನಿಮಾ ನೋಡಿ ಮುಖ್ಯಮಂತ್ರಿಯವರು ಕಣ್ಣೀರು ಹಾಕುತ್ತಾರೆ. ಆದರೆ ರಾಜ್ಯದ ಜನತೆಗೆ ನೆರವಾಗುವ ಹೃದಯವಂತಿಕೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪಿಎಸ್ಐ ಹಗರಣ ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ. ಇಲ್ಲಿ 50,000 ಜನರು ತೊಂದರೆಗೆ ಸಿಲುಕಿದ್ದಾರೆ. ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ ಜೀವನವನ್ನು ರಾಜ್ಯ ಬಿಜೆಪಿ ಸರ್ಕಾರ ಕೊಲೆ ಮಾಡಿದೆ. ಈ ಕೊಲೆಗೆ ಅಂದಿನ ಗೃಹ ಸಚಿವರೇ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.