ಬಾದಾಮಿ, ಜು 15 (DaijiworldNews/MS): ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಹಿಳೊಬ್ಬರು ಸಿಟ್ಟಿಗೆದ್ದು ಹಣ ವಾಪಾಸ್ ಎಸೆದ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಗುಂಪು ಘರ್ಷಣೆಯಲ್ಲಿ ಗಾಯಾಗೊಂಡವರನ್ನು ವಿಚಾರಿಸಲೆಂದು ಸಿದ್ದರಾಮಯ್ಯ ರೂರು ಪಟ್ಟಣದಲ್ಲಿ ಆಶೀರ್ವಾದ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ರಫೀಕ್ ಎಂಬವರ ಆರೋಗ್ಯ ವಿಚಾರಿಸಿ 2 ಲಕ್ಷ ರೂ ಪರಿಹಾರ ನೀಡಿದ್ದರು.
ಸಿದ್ದು ನೀಡಿದ ಪರಿಹಾರದ ದುಡ್ಡನ್ನು ರಜ್ಮಾ ಎಂಬ ಮಹಿಳೆ , ನಮಗೆ ಹಣ ಬೇಡ , ನ್ಯಾಯ ಬೇಕು, ನೆಮ್ಮದಿ ಬೇಕು ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿ ಕಾರಿಗೆ ಹಣವನ್ನು ವಾಪಾಸ್ ಎಸೆದಿದ್ದಾರೆ.