ಶ್ರೀನಗರ,ಜು 15 (DaijiowrldNews/HR): ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಮತ್ತೆ ಪುನರಾರಂಭಿಸಿದ 36 ಗಂಟೆಗಳಲ್ಲಿಯೇ ಮತ್ತೆ ಎಂಟು ಮಂದಿ ಮೃತಪಟ್ಟಿದ್ದು, ವಿಪರೀತ ಮಳೆ ಹಾಗೂ ಗುಡ್ಡಗಳ ಕುಸಿತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮತ್ತೆ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮೃತಪಟ್ಟವರನ್ನು ಕರ್ನಾಟಕದ ಬಸವರಾಜ (68), ರಾಜಸ್ಥಾನದ ಮೊಂಗಿಲಾಲ್ (52), ಗುಜರಾತ್ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್ (57), ಸಿಂಗಪುರದ ಪೂನಿಯಾಮೂರ್ತಿ (63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಆಂಧ್ರಪ್ರದೇಶದ ಕಲವಲ ಸುಬ್ರಮಣ್ಯಂ (63), ಉತ್ತರ ಪ್ರದೇಶದ ಗೋವಿಂದ್ ಶರಣ್ (34) ಮತ್ತು ಹರಿಯಾಣದ ಸತ್ವೀರ್ ಸಿಂಗ್ (70) ಎಂದು ಗುರುತಿಸಲಾಗಿದೆ.
ಇನ್ನು ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಒಟ್ಟು 15 ಮಂದಿ ಯಾತ್ರಿಕರು ಸೇರಿ ಒಟ್ಟೂ 33 ಮಂದಿ ಮೃತಪಟ್ಟಿದ್ದರು.