ತುಮಕೂರು, ಜು 15 (DaijiowrldNews/HR): ಮೊದಲ ಎರಡು ಕೊರೊನಾ ಡೋಸ್ ಪಡೆದುಕೊಂಡು 60 ದಿನ ಕಳೆದ 18 ರಿಂದ 59 ವಯೋಮಾನದ ಎಲ್ಲರೂ ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಿ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ಪಡೆದುಕೊಳ್ಳಬಹುದು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಈ ವಾರದ ಆರಂಭದಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೊರೊನಾ ಲಸಿಕೆಗಳ ಉಚಿತ ಡೋಸ್ಗಳನ್ನು ನೀಡುವ ಸರ್ಕಾರದ ನಿರ್ಧಾರವು ದೇಶದ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದರು.
ಇನ್ನು ಇಲ್ಲಿಯವರೆಗೆ 18 ರಿಂದ 59 ವಯೋಮಾನದ 77.10 ಕೋಟಿ ನಾಗರಿಕರು ಲಸಿಕೆ ಪಡೆದಿದ್ದು, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನರು ಒಟ್ಟು 16.80 ಕೋಟಿ ಅರ್ಹ ಜನಸಂಖ್ಯೆಯಲ್ಲಿ ಶೇ.25.84 ರಷ್ಟು ಮತ್ತು ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಅನ್ನು ಪಡೆದಿದ್ದಾರೆ.