ನವದೆಹಲಿ, ಜು 15 (DaijiworldNews/MS): ನಗರಗಳಲ್ಲಿ ವಾಹನ ದಟ್ಟಣೆ ಒಂದು ಬೃಹತ್ ಸಮಸ್ಯೆಯಾಗಿ ಬೆಳೆದು ನಿಂತಿದೆ. ರಸ್ತೆಯ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಕರ್ಕಶ ಹಾರ್ನ್ ಗಳಿಂದ ಹೃದಯವೇ ಕೈಗೆ ಬಂದಂತಹ ಸ್ಥಿತಿಗೆ ಸಿಲುಕುತ್ತೇವೆ. ಅತಿಯಾದ ಹಾರ್ನ್ ಶಬ್ದಗಳ ಕಾಟ ನಗರ ಜೀವನದಲ್ಲಿ ಒಂದು ರೀತಿಯ ಮನೋವೇದನೆಯನ್ನು ಹುಟ್ಟುಹಾಕುತ್ತಿದೆ.
ಹಾರ್ನ್ಗಳ ಹಿಂಸೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ನಿಜಕ್ಕೂ ಈ ಕಿರಿಕಿರಿ, ಸದ್ದು–ಗದ್ದಲದ ಅಗತ್ಯವಿದೆಯೇ? ಇಲ್ಲ ಎಂದಾದರೆ ನಾವೆಲ್ಲ ಏಕೆ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ? ಎಂಬುವುದಕ್ಕೆ ಮಾದರಿ ಎಂಬಂತೆ ದೆಹಲಿಯಲ್ಲಿ ಆಟೋ ವಾಹನದ ಮೇಲಿರುವ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಇದರ ಹಿಂದೆ ಮುದ್ರಿಸಲಾದ ಬ್ಯಾನರ್ ಸರಳವಾದ ಪ್ರಶ್ನೆಯನ್ನು ಹೊಂದಿದ್ದು ಕೌನ್ ಬನೇಗಾ ಕರೋಡ್ಪತಿ ಶೈಲಿಯಲ್ಲಿದೆ.
ಈ ವಿನೋದಮಯ ಪ್ರಶ್ನೆಯು, “ಟ್ರಾಫಿಕ್ ಮೇ ಹಾರ್ನ್ ಬಜಾನೆ ಸೆ ಕ್ಯಾ ಹೋತಾ ಹೈ? (ನೀವು ಟ್ರಾಫಿಕ್ನಲ್ಲಿ ಹಾರ್ನ್ ಮಾಡಿದಾಗ ಏನಾಗುತ್ತದೆ?)” ಎಂದಿದೆ ,ಇದಕ್ಕೆ ನಾಲ್ಕು ಆಯ್ಕೆಗಳು ನೀಡಲಾಗಿದ್ದು ಇದು ಕೂಡಾ ಅಷ್ಟೇ ವಿಡಂಬನಾತ್ಮಕವಾಗಿದೆ.
ಎ: ಟ್ರಾಫಿಕ್ ಲೈಟ್ ತ್ವರಿತವಾಗಿ ಹಸಿರು ಬಣ್ಣಕ್ಕೆ ತಿರುಗುತ್ತದೆಯೇ? ( ಲೈಟ್ ತಿಳಿ ಜಲ್ದಿ ಗ್ರೀನ್ ಹೋತಿ ಹೈ
ಬಿ: ರಸ್ತೆ ಏಕಾಏಕಿ ವಿಶಾಲವಾಗುತ್ತದೆ(ಸಡಕ್ ಚೌಡಿ ಹೋ ಜಾತಿ ಹೈ)
ಸಿ: ವಾಹನ ಹಾರಲು ಪ್ರಾರಂಭಿಸುತ್ತದೆ ( ಗಾಡಿ ಉಡ್ನ ಲಗ್ತಿ ಹೈ)
ಡಿ: ಏನೂ ಇಲ್ಲ(ಕುಚ್ ನಹಿ)
ಹೀಗಿರುವಾಗ ನೀವು ಯಾವ ಆಯ್ಕೆಯನ್ನು ಆರಿಸಿದ್ದೀರಿ ? ಎಂದು ನಮಗೆ ತಿಳಿಸಿ.!