ಚೆನ್ನೈ, ಜು 15 (DaijiworldNews/MS): ಬಹುಭಾಷಾ ನಟ ಹಾಗೂ ಚಿತ್ರ ನಿರ್ಮಾಪಕ ಪ್ರತಾಪ್ ಪೋತನ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ೯೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಚೆನ್ನೈನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಇಂದು ಬೆಳಗ್ಗೆ ಕೆಲಸಗಾರು ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
1980 ರ ದಶಕದಿಂದ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಆಗಸ್ಟ್ 13, 1952 ರಂದು ಜನಿಸಿದ ಅವರು 15 ವರ್ಷ ವಯಸ್ಸಿನಲ್ಲೇ ತಮ್ಮ ತಂದೆ ಕೊಳತಿಂಕಲ್ ಪೋತನ್ ಅವರನ್ನು ಕಳೆದುಕೊಂಡರು. ಊಟಿಯಲ್ಲಿ ಲಾರೆನ್ಸ್ ಸ್ಕೂಲ್, ಲವ್ಡೇಲ್ ಅನ್ನು ಮುಗಿಸಿದ ನಂತರ, ಅವರು ತಮ್ಮ ಪದವಿಗಾಗಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಸೇರಿದರು.
ಅವರು ಮುಂಬೈ ನಲ್ಲಿ ಜಾಹೀರಾತು ಏಜೆನ್ಸಿಯಲ್ಲಿ ಕಾಪಿರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ನಟಿ ರಾಧಿಕಾ ಅವರನ್ನು ಮದುವೆಯಾಗಿ ಒಂದು ವರ್ಷ ಜೀವನ ನಡೇಸಿದ್ದರು. ನಂತರ ಅವರು ಅಮಲಾ ಸತ್ಯನಾಥ್ ಅವರನ್ನು ಮರುಮದುವೆಯಾದರು. 22 ವರ್ಷಗಳ ದಾಂಪತ್ಯದ ನಂತರ ಅವರು 2012 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಕೀಯಾ ಎಂಬ ಮಗಳಿದ್ದಾಳೆ.