ಉತ್ತರ ಪ್ರದೇಶ, ಜು 15 (DaijiowrldNews/HR): ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಲುಲೂ ಮಾಲ್ನಲ್ಲಿ ಜನರ ಗುಂಪೊಂದು ತೆರೆದ ಜಾಗದಲ್ಲಿ ನಮಾಜ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೆರೆದ ಜಾಗದಲ್ಲಿ ನಮಾಜ್ ಮಾಡುತ್ತಿರುವ ಕುರಿತು ಅಖಿಲ ಭಾರತೀಯ ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದ್ದು, ಮಾಲ್ನಲ್ಲಿ ಮತ್ತೊಮ್ಮೆ ನಮಾಜ್ ಮಾಡಿದರೆ ನಾವು ಸುಂದರಕಾಂಡ ಪಠಿಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಇನ್ನು ಯೋಗಿ ಆದಿತ್ಯನಾಥ್ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಇದರ ಹೊರತಾಗಿಯೂ ಕೆಲವರು ಲುಲೂ ಮಾಲ್ನಲ್ಲಿ ನಮಾಜ್ ಮಾಡಿರುವುದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಟನೆ ಒತ್ತಾಯಿಸಿದೆ.