ಪಾಟ್ನಾ, ಜು 15 (DaijiowrldNews/HR): ಆರ್ಎಸ್ಎಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಪಾಟ್ನಾ ಎಸ್ಎಸ್ಪಿ ಮಾನವಜೀತ್ ಸಿಂಗ್ ಧಿಲ್ಲೋನ್ ಅವರಿಗೆ ಬಿಹಾರ ಪೊಲೀಸರು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ಎಡಿಜಿ ಜಿತೇಂದ್ರ ಸಿಂಗ್ ಗಂಗ್ವಾರ್ ಅವರು ನೀಡಿದ ಶೋಕಾಸ್ ನೋಟಿಸ್ನಲ್ಲಿ 'ಎಸ್ಎಸ್ಪಿ ಅವರು ಸಾರ್ವಜನಿಕವಾಗಿ ಅಂತಹ ಹೇಳಿಕೆಯನ್ನು ಏಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಇನ್ನು ಆರ್ಎಸ್ಎಸ್ ತಮ್ಮ ಕಾರ್ಯಕರ್ತರನ್ನು ಸಂಘಟಿಸಿ ಹೇಗೆ ತರಬೇತಿ ನೀಡಲಾಗುತ್ತಿದೆಯೋ, ಇದೇ ಮಾದರಿಯನ್ನು ಪಿಎಫ್ಐ ಅನುಸರಿಸುತ್ತಿದೆ. ಮಾರ್ಷಲ್ ಆರ್ಟ್ಸ್ ವೇಷದಲ್ಲಿ ಅವರು ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ ಎಂದು ಧಿಲ್ಲೋನ್ ಹೇಳಿಕೆ ನೀಡಿದ್ದಾರೆ.
ಧಿಲ್ಲೋನ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿಯು ಅವರನ್ನು ಅಧಿಕಾರಿಯ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.