ನವದೆಹಲಿ, ಜು 14 (DaijiworldNews/DB): ದೇಶದ ವಿವಿಧ ನಗರಗಳಲ್ಲಿ ಸಂಜೆ ಸುಮಾರು 5 ಗಂಟೆಯಿಂದ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದ ವಿದ್ಯಾಮಾನ ನಡೆಯಿತು. ಮೊಬೈಲ್, ಡೆಸ್ಕ್ಟಾಪ್ಗಳೆರಡಲ್ಲೂ ಟ್ವಿಟರ್ಗೆ ಲಾಗಿನ್ ಆಗಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಯಿತು.
ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್ ಡೌನ್ ಆಗಿದ್ದೇ ಸೇವೆ ಸ್ಥಗಿತಗೊಳ್ಳಲು ಕಾರಣವಾಗಿದೆ. ಟ್ವಿಟರ್ ಬಳಸಲು, ವೀಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಟ್ವಿಟರ್ ಬಳಕೆ ಅಸಾಧ್ಯವಾದ ಬಗ್ಗೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನೇ ಬಳಕೆದಾರರು ಟ್ರೆಂಡ್ ಮಾಡಲು ಆರಂಭಿಸಿದರು. ಕೆಲವರು ಖಾತೆಯನ್ನು ನೇರವಾಗಿ ಲಾಗೌಟ್ ಮಾಡಿ ಬಳಿಕ ಲಾಗ್ ಇನ್ ಮಾಡಿದರೂ ಬಳಕೆ ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ಸೇವೆ ಸ್ಥಗಿತದ ಬಗ್ಗೆ ಬಳಕೆದಾರರು ದೂರಿದರೂ ಟ್ವಿಟರ್ ಸಂಸ್ಥೆಯು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮುಂತಾದ ನಗರಗಳಲ್ಲಿ ಟ್ವಿಟರ್ ಸರ್ವರ್ ಡೌನ್ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ ಎಂದು ತಿಳಿದು ಬಂದಿದೆ.