ನವದೆಹಲಿ, ಜು 14 (DaijiworldNews/DB): ಅಕ್ರಮ ಫೋನ್ ಕದ್ದಾಲಿಕೆ ಮತ್ತು ಸ್ಟಾಕ್ ಎಕ್ಸ್ಚೇಂಜ್ ಉದ್ಯೋಗಿಗಳ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.
ಅಲ್ಲದೆ ನಾಲ್ಕು ದಿನಗಳ ಕಾಲ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಟಾಕ್ ಮಾರ್ಕೆಟ್ ಉದ್ಯೋಗಿಗಳ ಫೋನ್ ಕರೆಗಳನ್ನು ಕಾನೂನುಬಾಹಿರವಾಗಿ ಅಡ್ಡಗಟ್ಟುವ ಮೂಲಕ ಅವರ ಮೇಲೆ ಗೂಢಚರ್ಯೆ ಸಂಚು ರೂಪಿಸಿದ್ದ ಆರೋಪ ಅವರ ಮೇಲಿತ್ತು.
ಈ ಹಿಂದೆ ಕಳೆದ ಮಾರ್ಚ್ನಲ್ಲಿ ಸಿಬಿಐಯು ಎನ್ಎಸ್ಇ ಕೊ-ಲೊಕೇಶನ್ ಹಗರಣ ವಿಚಾರವಾಗಿ ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಿತ್ತು. 59 ವರ್ಷದ ಚಿತ್ರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು 2016ರಲ್ಲಿ ತೊರೆದಿದ್ದರು ಎಂದು ವರದಿಗಳು ತಿಳಿಸಿವೆ.