ನವದೆಹಲಿ,ಜು 14 (DaijiworldNews/MS): ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿಯ ಹೈಕೋರ್ಟ್ ವಜಾಗೊಳಿಸಿದೆ.
ಪ್ರವಾಹ ಹಾಗೂ ಇತರೆ ಕೆಲವು ಕಾರಣಕ್ಕೆ ನೀಟ್ ಪರೀಕ್ಷೆ ಮುಂದೂಡುವಂತೆ ಕೋರಿ ವಿದ್ಯಾರ್ಥಿಗಳ ತಂಡವೊಂದು ಅರ್ಜಿ ಸಲ್ಲಿಸಿತ್ತು. ನೀಟ್ ಪರೀಕ್ಷೆ ಮುಂದೂಡಿಕೆಯಿಂದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕೋರ್ಟ್ ಹೇಳಿದೆ.
ಜುಲೈನಲ್ಲಿ ಬೇರೆ ಪರೀಕ್ಷೆ ನಿಗದಿಯಾದ ಕಾರಣ ನೀಟ್ನ್ನು 4 ವಾರ ಮುಂದೂಡುವಂತೆ ಕೋರಲಾಗಿತ್ತು. ಅಂತಿಮ ಕ್ಷಣದಲ್ಲಿ ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದಾಗಿ ಹೇಳಿದ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ. ಜು.17ಕ್ಕೆ ನೀಟ್ ಪರೀಕ್ಷೆ ನಡೆಯಲಿದ್ದು, 18 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ.