ಬೆಂಗಳೂರು, ಜು 14 (DaijiworldNews/HR): ದಿವಂಗತ ನಟ ಡಾ. ಪುನೀತ್ ರಾಜಕುಮಾರ್ ಅವರು ದೈವದೀನರಾಗಿ ಒಂದು ವರ್ಷವೂ ಕಳೆದಿಲ್ಲ. ಆಗಲೇ ಟ್ವಿಟರ್ ಸಂಸ್ಥೆ ಅವರ ಖಾತೆಯ ಬ್ಲೂಟಿಕ್ ತೆಗೆದು ಹಾಕಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪುವ ಮುನ್ನ ಸಾವನ್ನಪ್ಪಿದ್ದ ಹಿಂದಿ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಖಾತೆಯ ಬ್ಲೂಟಿಕ್ ನ್ನು ಹಾಗೆಯೇ ಉಳಿಸಿಕೊಂಡಿದ್ದು, ಪುನೀತ್ ರಾಜ್ ಕುಮಾರ್ ಅವರ ಖಾತೆಯ ಬ್ಲೂ ಟಿಕ್ ನ್ನು ತೆಗೆದು ಹಾಕಿದೆ.
ಇನ್ನು ಟ್ವಿಟರ್ ಸಂಸ್ಥೆ ಪುನೀತ್ ರಾಜಕುಮಾರ್ ಅವರ ಖಾತೆಯ ಬ್ಲೂಟಿಕ್ ತೆಗೆದು ಹಾಕಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬ್ಲೂ ಟಿಕ್ ಅನ್ನು ಪುನಸ್ಥಾಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ.